ಸೋಮವಾರ, ಜುಲೈ 20, 2015

ತಾತನ ನಾಟಿ ಔಷದಿ ಕೈ ರಿಪೇರಿ ಮಾಡಿತು.
                                                                                            
ಅದು ಬಿರು ಬಿಸಿಲ ದಿನಗಳು ಶಾಲೆಗೆ ರಜೆ ಆದ್ದರಿಂದ ಊರಲ್ಲಿ ನಾವೆ ರಾಜರು, ನಮಗೆ ಕಟ್ಟಿ ತುರಿಸುವರಿಲ್ಲ, ಹಿಡಿದು ಮೇಯಿಸುವರಿಲ್ಲ, ನಾವು ಆಡಿದ್ದೆ ಆಟ. ಇಡಿ ಬೇಸಿಗೆ ಮುಗಿಯುವಷ್ಟರಲ್ಲಿ ಇವರ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆಯೊ ಎಂದು ಊರ ಜನ ಕಾಯುತ್ತಿದ್ದರು.
ನಾನು ನಗರದಲ್ಲಿ ಶಾಲೆ ಕಲಿಯುತ್ತಿದ್ದರಿಂದ ಹಳ್ಳಿಗೆ ಬಂದರೆ ನಮಗೆ ಎರಡು ಕೊಂಬು ಬರುತ್ತಿದ್ದವು. ಹಳ್ಳಿಯ ಗೆಳೆಯರ ಜೊತೆಗೂಡಿ ಮನೆಯವರ ಗೊಣಗುವಿಕೆ ಮಧ್ಯೆ ನಮ್ಮ ಪ್ರಭಾತ ಪೇರಿ ಸಾಗುತ್ತಿತ್ತು. ಪರಸ್ಪರ ಕಿಚಾಯಿಸುತ್ತ, ಅಡವಿ ಅಡವಿ ತಿರುಗುತ್ತಿದ್ದೆವು. ನೀತ್ಯ ಚಿಣ್ಣಿ ದಾಂಡು, ಗುಡು ಗುಡು ಚೌಡಕ್ಕೆ, ಲೊ,ಲೊ ತಮ್ಮಯ ಲಡ್ಡು ಎಲ್ಲಿ ಬಚ್ಚಿಟಿ, ಮರ ಕೋತಿ ಆಟ ಮತ್ತು ನಮ್ಮ ಪೇವರೆಟ್ ಆಟ ಕಬ್ಬಡಿ ಆಡುತ್ತಿದ್ದೆವು.
ಅದೊಂದು ದಿನ ಗೇಳೆಯ ಸಂತೋಷ ನುಣ್ಣಗ್ಗೆ ತಲೆ ಬೊಳಿಸಿಕ್ಕೊಂಡು ಕಬ್ಬಡಿ ಆಡಲು ಬಂದಿದ್ದ. ನಮಗೊ ನುಣ್ಣಗೆ ತಲೆ ಕಂಡರೆ ಮುಗಿತು ಟಪ್ಪಾ ಟಪ್ಪಾ ಅಂತಾ ಬಾರಿಸುತ್ತಿದ್ದೆವು. ಅಂದು ಕಬ್ಬಡಿ ಆಟ ಪ್ರಾರಂಭವಾಯಿತು ಮೊದಲು ಎದುರಾಳಿ ಗುಂಪಿನವರನ್ನು ಹಿಡಿಯಲು ಕೊಕ್ಕ... ಕೊಕ್ಕ... ಕೊಕ್ಕ... ಕೊಕ್ಕ... ಅಂತ ಮುಟಲು ಹೊಗಿ ಸಂತೋಷನ ತಲೆಗೆ ಜೊರಾಗಿ ಒಂದು ಪೆಟ್ಟು ಕೊಟ್ಟು ಬಂದೆ. ಮೊದಲೆ ಬೊಳು ತಲೆಯಾದ್ದರಿಂದ ಆತನ ಕಣ್ಣಲ್ಲಿ ನೀರು ಜೀನುಗಿತು. ಇರ್ಲಿ ಗಪ್ಪಾಗಲೆ ಅಳಬ್ಯಾಡ ಎಂದು ಎಲ್ಲರು ಸಮಾಧಾನ ಪಡಿಸಿದೆವು.
ನಂತರ ಆತನ ಸರದಿ ಬಂದಿತ್ತು. ನೇರ ಬಂದವನೆ ನನ್ನನ್ನೆ ಗುರಿಯಾಗಿಸಿ ಪೆಟ್ಟು ಕೊಡಲು ಬಂದ ನಿಯಂತ್ರಣ ತಪ್ಪಿ ನನ್ನ ಮೇಲೆಯೆ ಬಿದ್ದ. ಬುಡದಲ್ಲಿ ನನ್ನ ಕೈ ಮಗುಚಿ ಉಳುಕಿತು, ಕೇಲವೆ ಕ್ಷಣಗಳಲ್ಲಿ ಉಬ್ಬಿ ಕಡಬಿನಂತಾಯಿತು. ಅಳ್ಳುತ್ತಾ ನೇರ ಮನೆಗೆ ಹೋದೆ ಪಕ್ಕದಲ್ಲೆ ಇದ್ದ ನಾಟಿ ಔಷದಿ ಕೊಡುವ ಮುತ್ಯಾ ಕೈಯನ್ನು ಬಿಗಿಯಾಗಿ ಹಿಡಿದು ಬೆರಳು ಸರಿಪಡಿಸಿ, ಕೈಗೆ ಯಾವುದೊ ಕಟ್ಟಿಗೆ ತುಕ್ಕಡಿಗಳಿಂದ ಬೇಲ್ಟ ತರ ಮಾಡಿ ಕಟ್ಟಿಬಿಟ್ಟ.
ಹತ್ತು ದಿನದಲ್ಲಿ ಕಡಿಮೆಯಾಗುತ್ತೆ, ನೀತ್ಯ ಸಂಜೆ ಮಲಗುವಾಗ ಆಳಿ ಪಾಯಸ ಕುಡಿ. ದಿನಾಲು ಬಂದು (ಮಸಾಜ ಮಾಡಿಕೊಂಡು) ಒರೆಸಿಕ್ಕೊಂಡು ಹೊಗು ಎಂದ ಆಯ್ತು ಅಂತ ತಲೆ ಅಳಾಡಿಸುತ್ತ ಹೊರ ಬಂದೆ. ಹತ್ತು ದಿನಗಳವರೆಗೆ ಕೈ ಬೆನೆ ನೇಪ ಹೇಳಿ ಅದೆ ಶುರುವಾದ ಶಾಲೆಗೆ ಚಕ್ಕರ ಹಾಕಿ ಮಜಾ ಮಾಡಿದೆ. ಆದರೆ ಕೈ ಮಾಡಿದ ತ್ರಾಸು ಅಷ್ಟಿಷ್ಟಲ್ಲ. ತಾತನ ಮಸಾಜ ಕೈಗೆ ಪುಲ್ ಮಜಾ ಕೊಡುತ್ತಿತ್ತು.
ಮನೆಯಲ್ಲಿ ಅಮ್ಮ ಡಾಕ್ಟ್ರ ಹತ್ರ ಹೊದ್ರೆ ಸಾವಿರಾರು ಖಚರ್ಾ ಆಗ್ತಿತ್ತು. ಮುತ್ಯಾನ ಪುಣ್ಯಾಲಿಂತ ನಾವು ಉಳಿದಿವಿ ಇನ್ನಾರ ಎಚ್ಚರಲಿಂತ ಇರು ಎಂದ ಮಾತು ಇಂದಿಗು ಕಿವಿಯಲ್ಲಿ ಗೊಣಗುತ್ತಿದ್ದೆ.
ರಮೇಶ ಎಸ್ ಸರಡಗಿ
ಮೇಳಕುಂದಾ (ಬಿ)
ಕಲಬುರಗಿ 7406868310


ಭಾನುವಾರ, ಮೇ 18, 2014







ಕೋನೆ ಎಲ್ಲಿ... 
ಜನಸಂಖ್ಯೆ ತಕ್ಕ ಮೂಲಭೂತ ಸೌಕರ್ಯಗಳು ದೋರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ ಈ ಬಸ್ಸು. ನಮ್ಮ ದೇಶದಲ್ಲಿ ಎಷ್ಟೆ ರಸ್ಥೆಗಳಾದರು, ಸಕರ್ಾರಗಳು ಕಣ್ಣು ಮುಚ್ಚಿ ಕುಳಿತಿವೆ. ತಮ್ಮ ಹಕ್ಕು ಅರಚಿಕೋಳುವ ಸಂಘಟನೆಗಳು ಜಾತಿ ಧರ್ಮ ಭಾಷೆಗಳ ನೇಲೆಗಟ್ಟಿನಲ್ಲಿ ಕೇಲಸ ನಿರ್ವಹಿಸುತಿವೆ. ಈ ಪ್ರಕ್ರಿಯೆ ಹಿಗೆ ಮುಂದುವರೆದರೆ. ಯಾವುದೆ ಮೂಲ ಸೌಕರ್ಯಗಳಿಲ್ಲದೆ ದೇಶದ ಜನ ಆಘಾತಕಿಡಾಗುವ ಸಂಭವವಿದೆ.
ರಮೇಶ ಎಸ್ ಎಮ್
ಗುಲ್ಬಗರ್ಾ 

ಮಂಗಳವಾರ, ಮೇ 13, 2014


                        ನಾವು ಮಾಡಿದ ವಿನಾಶ

ಮರಗಿಡಗಳನೇಲ್ಲ ಬಯಲು ಮಾಡಿ
ಬಣವೆಯ ಒಟ್ಟಿದರೊ.
ಹರಿದು ಬರುವ ಹಳಕೊಳಕ್ಕೆ
ಕಾಯುತ್ತ ನಿಂತರೊ.

ಮಳೆ ಬರಲ್ಲಿಲವೆಂದು ಊರ
ದೇವರ ಮುಂದೆ ನಿಂತರೊ.
ದೇವರಿಗೆ ಕಾಯಿ ಕಪರ್ೂರ ಮಾಡಿ
ಮುಗ್ದ ಜೀವ ಬಲಿ ನಿಡಿದರೊ.

ಬರಲಿಲ್ಲ ಮಳೆ ಒಣಗೊಯ್ತು ಬೆಳೆ
ಜೀವ ತೆತ್ತವರಾರಿಲ್ಲ ಬಲಿ ನಿಡುವವರೆಲ್ಲ
ಬುದ್ದಿ ಬರಲಿಲ್ಲ ಅಂತ್ಯಕ್ಕೆ ಮುನ್ನುಡಿ ಬಯಸುತಿರುವರೆಲ್ಲ
ವಿನಾಶ ಖಚಿತ ತಾಳ್ಮೆಯಿಂದಿರಿ ಕ್ಷಣಿಕ.

                         ನಿಮ್ಮ ಆತ್ಮಿಯ ರಾಮ ....